Bigg Boss Kannada 5: Week 6: Verbal fight between Jaganath and Riaz Basha.
ಮತ್ತೆ ರೊಚ್ಚಿಗೆದ್ದು ಏಕವಚನ ಬಳಸಿದ ಜಗನ್.! ಇದು ಸೀಕ್ರೆಟ್ ಟಾಸ್ಕ್? ಜಗನ್ನಾಥ್ ಚಂದ್ರಶೇಖರ್.... 'ಬಿಗ್ ಬಾಸ್' ಮನೆಯ ಆಂಗ್ರಿ ಯಂಗ್ ಮ್ಯಾನ್. ಸಣ್ಣ ಪುಟ್ಟ ವಿಷಯಕ್ಕೆ ಟೆಂಪರ್ ರೈಸ್ ಮಾಡಿಕೊಳ್ಳುವ ಜಗನ್ನಾಥ್ ಈಗಾಗಲೇ 'ಬಿಗ್'ಮನೆಯಲ್ಲಿ ಹಲವು ರಾದ್ಧಾಂತಗಳಿಗೆ ಸಾಕ್ಷಿ ಆಗಿದ್ದಾರೆ. 'ಜ್ಯೂಸ್ ಬೇಕು' ಟಾಸ್ಕ್ ನಲ್ಲಿ ಸಮೀರಾಚಾರ್ಯ ಶರ್ಟ್ ಹರಿದು, ಏಕವಚನ ಪ್ರಯೋಗ ಮಾಡಿದ ಜಗನ್ನಾಥ್ ಇದೀಗ ಮತ್ತೊಮ್ಮೆ ಅದೇ ತಪ್ಪನ್ನ ಪುನರಾವರ್ತಿಸಿದ್ದಾರೆ.ತಟ್ಟೆ ಸರಿಯಾಗಿ ತೊಳೆಯದ ವಿಷಯಕ್ಕೆ ರಿಯಾಝ್ ಜೊತೆ ಜಗನ್ ಜಗಳವಾಡಿದ್ದಾರೆ. ರಿಯಾಝ್ ಗೆ 'ಲೋ..' ಎಂದು ಕರೆದು ಆವಾಝ್ ಹಾಕಿದ್ದಾರೆ ಜಗನ್. ಸಣ್ಣ ವಿಷಯವನ್ನ ಜಗನ್ ಇಷ್ಟು ದೊಡ್ಡದು ಮಾಡಿದ ಪರಿಣಾಮ, ಇದು ಸೀಕ್ರೆಟ್ ಟಾಸ್ಕ್ ಇರಬೇಕು ಎಂಬ ಲೆಕ್ಕಾಚಾರ ರಿಯಾಝ್ ತಲೆಯಲ್ಲಿ ಓಡುತ್ತಿದೆ. ತಿಂಡಿ ತಿಂದ ಬಳಿಕ ತಮ್ಮ ತಟ್ಟೆಯನ್ನ ರಿಯಾಝ್ ಸರಿಯಾಗಿ ತೊಳೆದಿರಲಿಲ್ಲವಂತೆ. ತಟ್ಟೆಯಲ್ಲಿ ದೋಸೆ ಹಾಗೇ ಇದ್ದ ಕಾರಣ, ಕ್ಲೀನ್ ಆಗಿ ತೊಳೆಯಿರಿ ಎಂದು ಜಗನ್ ಹೇಳಿದರು.